Tuesday, October 19, 2010

raktadalli kobbina amsha

ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾದಂತೆ ಹೃದಯದ ತೊಂದರೆಗಳು ಸಂಭವಿಸುತ್ತವೆ . ರಕ್ತದಲ್ಲಿನ ಕೊಬ್ಬಿನ ಅಂಶ ರಕ್ತ ನಾಳಗಳಲ್ಲಿ ಸಂಗ್ರಹವಾಗಿ ರಕ್ತನಾಳದ ವ್ಯಾಸವನ್ನು ತಗ್ಗಿಸುತ್ತದೆ . ಇದರಿಂದ ರಕ್ತನಾಳಗಳ ಸ್ಥಿಥಿಸ್ತಾಪಕತ್ವ ಗುಣವು ಕುಗ್ಗಿ ರಕ್ತನಾಳಗಳು ಗಡುಸಾಗುತ್ತವೆ. ಇದರಿಂದ ರಕ್ತ ಪರಿಚಲನೆಗೆ ಧಕ್ಕೆಯಾಗಿ ದೇಹದ ಅಂಗಗಳು ರಕ್ತ ಹೀನತೆಯಿಂದ ಹಾಗು ಆಮ್ಲಜನಕದ ಕೊರತೆಯಿಂದ ಬಳಲುತ್ತವೆ . ಹೃದಯ , ಮಸ್ತಿಷ್ಕ ಗಳ ರಕ್ತನಾಳಗಳಲ್ಲಿ ಕೊಬ್ಬಿನ ಸಂಗ್ರಹ ವಾದಾಗ  ಹ್ರಿದ್ರೋಗಗಳು ಹಾಗು ಪಾರ್ಶ್ವವಾಯು ತಲೆದೂರುತ್ತವೆ. ಆದರಿಂದ ರಕ್ತದಲ್ಲಿನ ಕೊಬ್ಬಿನಂಶ ಹೆಚ್ಚಾಗದಂತೆ ನಮ್ಮ ಆಹಾರ ಹಾಗು ವಿಹಾರಗಳನ್ನು ಬಲಾಯಿಸಿಕೊಳ್ಳುವುದು ಅತ್ಯಗತ್ಯ.  ಆದರೆ ಈ ಬದಲಾವಣೆ ಗಳ್ಳನ್ನು ತರುವ ಮುಂಚೆ ನಿಮ್ಮ ಕುಟುಂಬದ ವೈದ್ಯರನ್ನು ಕಾಣುವುದು ಅವಶ್ಯಕ. ಅವರ ಸಲಹೆಯಂತೆ ನಡೆಯುವುದು ಉತ್ತಮ . ಯೋಗ , ಧ್ಯಾನ ಇವುಗಳು ಸಹ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ  

0 comments:

Post a Comment