Tuesday, October 19, 2010
raktadalli kobbina amsha
ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾದಂತೆ ಹೃದಯದ ತೊಂದರೆಗಳು ಸಂಭವಿಸುತ್ತವೆ . ರಕ್ತದಲ್ಲಿನ ಕೊಬ್ಬಿನ ಅಂಶ ರಕ್ತ ನಾಳಗಳಲ್ಲಿ ಸಂಗ್ರಹವಾಗಿ ರಕ್ತನಾಳದ ವ್ಯಾಸವನ್ನು ತಗ್ಗಿಸುತ್ತದೆ . ಇದರಿಂದ ರಕ್ತನಾಳಗಳ ಸ್ಥಿಥಿಸ್ತಾಪಕತ್ವ ಗುಣವು ಕುಗ್ಗಿ ರಕ್ತನಾಳಗಳು ಗಡುಸಾಗುತ್ತವೆ. ಇದರಿಂದ ರಕ್ತ ಪರಿಚಲನೆಗೆ ಧಕ್ಕೆಯಾಗಿ ದೇಹದ ಅಂಗಗಳು ರಕ್ತ ಹೀನತೆಯಿಂದ ಹಾಗು ಆಮ್ಲಜನಕದ ಕೊರತೆಯಿಂದ ಬಳಲುತ್ತವೆ . ಹೃದಯ , ಮಸ್ತಿಷ್ಕ ಗಳ ರಕ್ತನಾಳಗಳಲ್ಲಿ ಕೊಬ್ಬಿನ ಸಂಗ್ರಹ ವಾದಾಗ ಹ್ರಿದ್ರೋಗಗಳು ಹಾಗು ಪಾರ್ಶ್ವವಾಯು ತಲೆದೂರುತ್ತವೆ. ಆದರಿಂದ ರಕ್ತದಲ್ಲಿನ ಕೊಬ್ಬಿನಂಶ ಹೆಚ್ಚಾಗದಂತೆ ನಮ್ಮ ಆಹಾರ ಹಾಗು ವಿಹಾರಗಳನ್ನು ಬಲಾಯಿಸಿಕೊಳ್ಳುವುದು ಅತ್ಯಗತ್ಯ. ಆದರೆ ಈ ಬದಲಾವಣೆ ಗಳ್ಳನ್ನು ತರುವ ಮುಂಚೆ ನಿಮ್ಮ ಕುಟುಂಬದ ವೈದ್ಯರನ್ನು ಕಾಣುವುದು ಅವಶ್ಯಕ. ಅವರ ಸಲಹೆಯಂತೆ ನಡೆಯುವುದು ಉತ್ತಮ . ಯೋಗ , ಧ್ಯಾನ ಇವುಗಳು ಸಹ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ
Wednesday, November 4, 2009
ಶರೀರ ಹಾಗು ತ್ರಿದೋಶಗಳು
ಆಯುರ್ವೇದದ ಪ್ರಕಾರ ದೇಹದ ಜೈವಿಕ ಕ್ರಿಯೆಯನ್ನು ೩ ದೋಷಗಳು (ತ್ರಿದೋಷ ) ನಿಯಂತ್ರಿಸುತ್ತವೆ . ಅವುಗಳೆಂದರೆ ವಾತ , ಪಿತ್ತ ಹಾಗು ಕಫ. ಈ ೩ ದೋಷಗಳು ಸಮಸ್ಥಿತಿಯಲ್ಲಿದ್ದರೆ ದೇಹ ಆರೋಗ್ಯವಾಗಿರುತ್ತದೆ . ಇವು ವಿಷಮಿಸಿದರೆ ಅನಾರೋಗ್ಯ ಉಂಟಾಗುತ್ತದೆ. ಇವು ವಿಷಮ ಸ್ಥಿಥ್ಗೆ ಬಂದಾಗ ದೇಹದಲ್ಲಿನ ಅಂಗ ಹಾಗು ಅಂಗಾಂಶಗಳನ್ನು ಕೆಡಿಸುತ್ತವೆ ಅಥವಾ ದೂಶಿಸುತ್ತವೆ ಆದ್ದರಿಂದ ಇವನ್ನು ದೋಷಗಳು ಎಂದು ಕರೆಯುತ್ತಾರೆ.
ತ್ರಿದೊಶಗಳಲ್ಲಿ ವಾಯು ಅಥವಾ ವಾತವೊಂದೆ ಶರೀರದ ಎಲ್ಲಾ ಭಾಗಗಳಲ್ಲೂ ಹಾಗು ಕೋಶಗಳಲ್ಲೂ ಚಲಿಸುವ ಗುಣವುಳ್ಳದ್ದು. ಮಿಕ್ಕೆರಡು ದೋಷಗಳು ಕಾಲಿಲ್ಲದವರಂತೆ ವಾತ ದೋಷ ಎಲ್ಲಿ ಹೊತ್ತುಕೊಂಡು ಹೋಗುತ್ತದೋ ಅಲ್ಲಿ ಹೋಗುತ್ತವೆ . ಮೋಡಗಳು ಗಾಳಿ ಹೊತ್ತೊಯ್ದೆಡೆ ಹೋಗುವಂತೆ .
ನಮ್ಮ ಜೀವನ ಶೈಲಿಯು ಅಂದರೆ ಆಹಾರ, ನಿದ್ದೆ, ವ್ಯಾಯಾಮ, ಚಲನೆ , ಮನಸ್ಸು ದೋಷಗಳ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ . ಈ ದೈನಂದಿನ ಕ್ರಿಯೆಗಳು ಆಯಾ ತಪ್ಪಿದಾಗ ದೊಷಗಳು ವಿಕೃತವಾಗಿ ದೇಹ ಅನಾರೋಗ್ಯದಿಂದ ಬಳಲುತ್ತದೆ . ಅಂತೆಯೇ ರೋಗಗಳು ಕಾಣಿಸಿಕೊಳ್ಳುತ್ತವೆ
ತ್ರಿದೊಶಗಳಲ್ಲಿ ವಾಯು ಅಥವಾ ವಾತವೊಂದೆ ಶರೀರದ ಎಲ್ಲಾ ಭಾಗಗಳಲ್ಲೂ ಹಾಗು ಕೋಶಗಳಲ್ಲೂ ಚಲಿಸುವ ಗುಣವುಳ್ಳದ್ದು. ಮಿಕ್ಕೆರಡು ದೋಷಗಳು ಕಾಲಿಲ್ಲದವರಂತೆ ವಾತ ದೋಷ ಎಲ್ಲಿ ಹೊತ್ತುಕೊಂಡು ಹೋಗುತ್ತದೋ ಅಲ್ಲಿ ಹೋಗುತ್ತವೆ . ಮೋಡಗಳು ಗಾಳಿ ಹೊತ್ತೊಯ್ದೆಡೆ ಹೋಗುವಂತೆ .
ನಮ್ಮ ಜೀವನ ಶೈಲಿಯು ಅಂದರೆ ಆಹಾರ, ನಿದ್ದೆ, ವ್ಯಾಯಾಮ, ಚಲನೆ , ಮನಸ್ಸು ದೋಷಗಳ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ . ಈ ದೈನಂದಿನ ಕ್ರಿಯೆಗಳು ಆಯಾ ತಪ್ಪಿದಾಗ ದೊಷಗಳು ವಿಕೃತವಾಗಿ ದೇಹ ಅನಾರೋಗ್ಯದಿಂದ ಬಳಲುತ್ತದೆ . ಅಂತೆಯೇ ರೋಗಗಳು ಕಾಣಿಸಿಕೊಳ್ಳುತ್ತವೆ
Friday, September 25, 2009
ಶರೀರ ಹಾಗು ಆತ್ಮದ ಸಂಬಂಧ
ಆಯುರ್ವೇದದ ಪ್ರಕಾರ ಶರೀರ ಹಾಗು ಆತ್ಮ "ಪಂಗ್ವಂಧ " (ಪಂಗು + ಅಂಧ) ನ್ಯಾಯದಂತೆ ಇರುತ್ತವೆ . ಪಂಗ್ವಂಧ ನ್ಯಾಯ ಎಂದರೇನು ? ಪಂಗು ಎಂದರೆ ಕಾಲಿಲ್ಲದವ ಎಂದರ್ಥ ಹಾಗು ಅಂಧ ಎಂದರೆ ಕಣ್ಣಿಲ್ಲದವ ಎಂದರ್ಥ . ಕಣ್ಣಿಲ್ಲದವನ ಹೆಗಲ ಮೇಲೆ ಕಾಲಿಲ್ಲದವ ಕುಳಿತುಕೊಂಡು ದಾರಿ ತೋರಿದಾಗ , ಆ ದಾರಿಯಲ್ಲಿ ನಡೆದು ಇಬ್ಬರೂ ಊರು ಮುಟ್ಟುತ್ತಾರೆ. ಅಂತೆಯೇ ಜಡ ಶರೀರದಲ್ಲಿ ಆತ್ಮ ಬಂದು ಸೇರಿದಾಗ ಶರೀರ ಮುಕ್ತಿ ಪಥದಲ್ಲಿ ನಡೆಯಲು ಸಿದ್ಧವಾಗುತ್ತದೆ . ಇಂತಹ ಆತ್ಮವುಳ್ಳ ಶರೀರವು ಮುಕ್ಥಿಪಥದಲ್ಲಿ ನಡೆಯುವಾಗ ರೋಗಗಳು ಅದನ್ನು ಭಾದಿಸದೆ ಇರುವಂತೆ , ಶರೀರವನ್ನು ಕಾಪಾಡಿಕೊಳ್ಳುವ ವಿಧಾನವನ್ನು ಹೇಳುವಂಥಹ ವೇದವೇ ಅಥವಾ ವಿಜ್ಞಾನವೇ ಆಯುರ್ವೇದ .
Friday, September 18, 2009
ಆಯುರ್ವೇದ ಎಂದರೇನು?
ಅನಾರೋಗ್ಯದಿಂದ ಬಳಲದೆ, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯದಿಂದ ಬಾಳುವ ಬಗೆಯನ್ನು ತೋರಿಸಿಕೊದುವಂಥಹ ವೇದವೇ ಆಯುರ್ವೇದ. ಇದು ಆಯುರ್ವೆದವೆಂದರೇನು ಎನ್ನುವ ಸಾಮಾನ್ಯ ಜನರ ಪ್ರಶ್ನೆಗೆ ಹೇಳಬಹುದಾದಂತಹ ಚಿಕ್ಕದಾದ ಚೊಕ್ಕದಾದ ಉತ್ತರ . ವೇದಗಳ ಕಾಲದಿಂದಲೂ ನಡೆದುಬಂದ ಈ ಭಾರತೀಯ ವೈದ್ಯ ಪದ್ಧತಿ ಈಗ ಜನಮನ್ನಣೆ ಗಳಿಸುತ್ತಿದೆ . ಇದಕ್ಕೆ ಕಾರಣ ಇದರಲ್ಲಿ ಉಲ್ಲೇಖಿಸಿರುವ ನೈಸರ್ಗಿಕ ಉಪಾಯಗಳು ಹಾಗು ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನಗಳು . ಈ ಬ್ಲಾಗಿನ ಉದ್ದೇಶವೇನೆಂದರೆ ಆಯುರ್ವೇದದಲ್ಲಿ ವಿವರಿಸಿರುವ ಸರಳ ಉಪಾಯಗಳಿಂದ ಆರೋಗ್ಯ ಕಾಪಾಡಿಕೊಂಡು , ಉಲ್ಲಸಿತ ಸುಖ ಜೀವನ ನಡೆಸುವ ಬಗ್ಗೆ ಆರೋಗ್ಯಕರ ಚರ್ಚೆ ನಡೆಸುವುದು. ಇದಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ .
Subscribe to:
Posts (Atom)